ಹಳಿಯಾಳ: ಹವಗಿ ತಿಮ್ಮಾಪುರ ರಸ್ತೆಯಲ್ಲಿ ಸ್ಪಿಕರ್ ಅಳವಡಿಸಿಕೊಂಡು ದೊಡ್ಡದಾಗಿ ಕೂಗುತ್ತಿದ್ದ ಸಂತೋಷ ಚಲುವಾದಿ (32)ಗೆ ಇದೀಗ ಸಂಕಷ್ಟ ಶುರುವಾಗಿದೆ.
ಚಾಲಕ ವೃತ್ತಿ ಮಾಡುವ ಸಂತೋಷ ಚಲುವಾದಿ ಜುಲೈ 21ರ ರಾತ್ರಿ 8 ಗಂಟೆಗೆ
ಅಹುಜಾ ಕಂಪನಿಗೆ ಸೇರಿದ 2 ದೊಡ್ಡ ಸ್ಪೀಕರ್ಗೆ ಮೈ ಅಳವಡಿಸಿ ಅರಚುತ್ತಿದ್ದ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಅಲ್ಲಿನವರು ಪೊಲೀಸರಿಗೆ ದೂರು ನೀಡಿದ್ದರು. ಪಿಸೈ ವಿನೋದ ಎಸ್ ಕೆ ಆಗಮಿಸಿ ಮೈಕ್ ಬಳಸಲು ಪೊಲೀಸರಿಂದ ಪಡೆದ ಅನುಮತಿ ಪತ್ರ ತೋರಿಸುವಂತೆ ಸೂಚಿಸಿದರು. ಸಾರ್ವಜನಿಕ ಸ್ಥಳದಲ್ಲಿ ಮೈಕ್ ಬಳಸಲು ಆತ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಆತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.