ಕಳೆದ ಒಂದು ವಾರದಿಂದ ಶಾಲಾ-ಕಾಲೇಜುಗಳಿಗೆ ನೀಡಿದ್ದ `ಮಳೆ ರಜೆ\’ ಸೋಮವಾರ ಮುಕ್ತಾಯವಾಗಿದೆ.
ಜಿಲ್ಲೆಯಲ್ಲಿ ಆರಂಜ್ ಅಲರ್ಟ ಘೋಷಿಸಲಾಗಿದ್ದು, ಸದ್ಯಕ್ಕೆ ರೆಡ್ ಅಲರ್ಟ ಮುಕ್ತಾಯವಾಗಿದೆ. ಈ ಹಿನ್ನಲೆ ಜುಲೈ 23ರಿಂದ ಜಿಲ್ಲೆಯ ಶಾಲಾ ಕಾಲೇಜುಗಳು ಬಾಗಿಲು ತೆರೆಯಲಿದೆ. ಅದರ ಪ್ರಕಾರ ತರಗತಿಗಳು ಶುರುವಾಗಲಿದೆ. ಮಳೆ ಕಾರಣದಿಂದ ಸತತ ರಜೆ ನೀಡಿದ ಹಿನ್ನಲೆ ಮಕ್ಕಳ ವಿದ್ಯಾಬ್ಯಾಸಕ್ಕೆ ಹಿನ್ನಡೆ ಆಗುತ್ತಿರುವ ಬಗ್ಗೆ ಶಿಕ್ಷಣ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಜೊತೆಗೆ ಮುಂದಿನ ದಿನಗಳಲ್ಲಿ ರಜೆ ಹೊಂದಾಣಿಕೆ ಮಾಡಿಕೊಂಡು ಪಾಠ ಮಾಡುವಂತೆ ಸೂಚಿಸಿದ್ದರಿಂದ ಮಕ್ಕಳಿಗೆ ಒತ್ತಡ ಹೆಚ್ಚಾಗಲಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿತ್ತು.