ಅಂಕೋಲಾ: ಶಿರೂರು ಗುಡ್ಡ ಕುಸಿತದ ಅನತಿ ದೂರದಲ್ಲಿ ಲಾರಿ ಚಾಲಕರು ಪ್ರತಿಭಟನೆ ನಡೆಸಿದ್ದು, ತಮಗೂ ಅರ್ಜುನ್\’ ಹುದುಗಿರುವ ಸ್ಥಳ ನೋಡಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.
`ಅರ್ಜುನ್\’ನನ್ನು ಹೊರತೆಗೆಯುವ ಕಾರ್ಯಾಚರಣೆಗೆ ಎಲ್ಲಾ ಲಾರಿ ಚಾಲಕರು ಸಹಕರಿಸುತ್ತೇವೆ. ನಾವು ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತೇವೆ. ಇದಕ್ಕೆ ಅವಕಾಶ ಕೊಡಬೇಕು\’ ಎಂದು ಒತ್ತಾಯಿಸಿದರು. `ಕಾರ್ಯಾಚರಣೆ ವಿಳಂಬವಾಗುತ್ತಿದ್ದು, 24 ಗಂಟೆಗಳ ಕಾಲ ಕೆಲಸ ನಡೆಯಬೇಕು\’ ಎಂದು ಒತ್ತಾಯಿಸಿದರು.