
ಶಿರಸಿ: ಶಕ್ತಿ ಮೋಟಾರ್ ಶೋರೂಂ\’ನಲ್ಲಿ ಕೆಲಸ ಮಾಡುವ ಉಂಚಳ್ಳಿಯ ನವೀನ್ ನಾಯ್ಕ ದಿವಗಿ ಬಳಿ ಬೈಕಿನಿಂದ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದು, ಈ ವೇಳೆ ನಡೆದು ಬರುತ್ತಿದ್ದ ಮಹಮದ್ ಗೌಸ್ ಎಂಬಾತನ ಕಾಲು ಮುರಿತಕ್ಕೂ ಕಾರಣನಾಗಿದ್ದಾನೆ.
ಜುಲೈ 18ರಂದು ರಾತ್ರಿ 8.45ಕ್ಕೆ ಶಿರಸಿ ಕಡೆಯಿಂದ ಬನವಾಸಿ ಕಡೆ ಬೈಕಿನಲ್ಲಿ ಹೋಗುತ್ತಿದ್ದ ಉಂಚಳ್ಳಿ ಬಳಿಯ ಬಿದ್ರಳ್ಳಿಯ ನವೀನ್ ನಾಯ್ಕ ದಿವಿಗಿ ಬಳಿ ಬೈಕಿನಿಂದ ಕೆಳಗೆ ಬಿದ್ದಿದ್ದಾನೆ. ಈ ವೇಳೆ ನವೀನನ ತಲೆಗೆ ಪೆಟ್ಟಾಗಿದೆ. ಆತ ಬಿದ್ದ ನಂತರವೂ ಬೈಕ್ ಮುಂದೆ ಚಲಿಸಿ ಪ್ರಿಂಟಿoಗ್ ಪ್ರೆಸ್\’ನಲ್ಲಿ ಕೆಲಸ ಮಾಡುವ ಹಳೆಹುಬ್ಬಳ್ಳಿ ಮೂಲದ ಮಹಮದ್ ಗೌಸ್ ಎಂಬಾತನಿಗೆ ಗುದ್ದಿದೆ. ಇದರ ಪರಿಣಾಮ ಮಹಮದ್ ಗೌಸ್\’ಗೆ ಸಹ ಮುಖ, ತಲೆ, ಕಾಲಿಗೆ ಪೆಟ್ಟಾಗಿದೆ.