ಕುಮಟಾ: ಅಗ್ನಿಶಾಮಕ ದಳ ಹಾಗೂ ತುರ್ತು ಸೇವೆಗಳ ಇಲಾಖೆಯ ಅಧಿಕಾರಿ ರವಿ ಚನ್ನಣ್ಣನವರ್ ಜಿಲ್ಲೆಗೆ ಆಗಮಿಸಿದ್ದು, ಗೋಕರ್ಣದಲ್ಲಿ ಸಂಚಾರ ನಡೆಸಿದ್ದಾರೆ.
ಇಲ್ಲಿನ ಮಹಾಬಲೇಶ್ವರ ದೇವಾಲಯಕ್ಕೆ ಆಗಮಿಸಿದ ಅವರು ಆತ್ಮಲಿಂಗಕ್ಕೆ ಆರತಿ ಮಾಡಿದರು. ದೇವಾಲಯದ ಮೇಲುಸ್ತುವಾರಿ ಸಮಿತಿ ಸದಸ್ಯ ಮಹಾಬಲ ಉಪಾಧ್ಯ ಪೂಜೆ ನೆರವೇರಿಸಿ ಅವರಿಗೆ ಪ್ರಸಾದ ವಿತರಿಸಿದರು. ಇದಕ್ಕೂ ಮೊದಲು ಮಹಾಗಣಪತಿ ದೇವಾಲಯಕ್ಕೂ ತೆರಳಿ ಅಲ್ಲಿ ಅವರು ಪೂಜೆ ಮಾಡಿದರು.