ಉತ್ತರ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ನೇಮಕಾತಿ ನಡೆಯುತ್ತಿದ್ದು, ಇದಕ್ಕಾಗಿ ಜುಲೈ 22ರಂದು ಧಾರವಾಡದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣ ದೈಹಿಕ ಪರೀಕ್ಷೆ ನಡೆದಿದೆ. ಈ ಪರೀಕ್ಷೆಗೆ ಹಾಜರಾಗದವರಿಗಾಗಿ ಜಿಲ್ಲಾ ಪೊಲೀಸ್ ಘಟಕ ಇನ್ನೊಂದು ಅವಕಾಶ ನೀಡಿದೆ.
ಜುಲೈ 23ರಂದು ಇನ್ನೊಮ್ಮೆ ದೈಹಿಕ ಪರೀಕ್ಷೆ ನಡೆಯಲಿದ್ದು, ಆನ್ಲೈನ್ ಮೂಲಕ ಪ್ರವೇಶ ಪತ್ರ ಪಡೆದು ಅಲ್ಲಿ ಹಾಜರಾಗಬಹುದು. ಯಾರಾದರೂ ನೌಕರಿ ಕೊಡಿಸುವ ಆಮೀಷ ಒಡ್ಡಿದರೆ 9480805200ಗೆ ಕರೆ ಮಾಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.