ಕುಮಟಾ: ತದಡಿ ಬಳಿ ಸೋಮವಾರ ವಿದ್ಯುತ್ ತಂತಿ ಸರಿಪಡಿಸುತ್ತಿದ್ದಾಗ ವಿದ್ಯುತ್ ಪ್ರವಹಿಸಿದ ಪರಿಣಾಮ ಹೆಸ್ಕಾಂ ಸಿಬ್ಬಂದಿ ಪ್ರಶಾಂತ ಪಟಗಾರ ಹಾಗೂ ಸುಭಾಷ ನಾಯ್ಕ ಎಂಬಾತರು ಗಾಯಗೊಂಡಿದ್ದಾರೆ.
ತದಡಿಯ ಐಸ್ ಪ್ಲಾಂಟ್ ಬಳಿ ವಿದ್ಯುತ್ ಸಮಸ್ಯೆ ಇರುವ ಬಗ್ಗೆ ದೂರು ಬಂದಿತ್ತು. ಈ ಹಿನ್ನಲೆ ಒಂದಷ್ಟು ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಅಲ್ಲಿನ 11 ಕೆ.ವಿ ಮಾರ್ಗವನ್ನು ಸರಿಪಡಿಸಲು ಕಂಬ ಹತ್ತಿದ ಈ ಇಬ್ಬರಿಗೆ ವಿದ್ಯುತ್ ಶಾಕ್ ತಗುಲಿದೆ. ಕಂಬ ಏರಿದವರು ಕೆಳಗೆ ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಸ್ಕಾಂ ಸಿಬ್ಬಂದಿಗೆ ಹಲವು ಕಡೆ ಗಾಯವಾಗಿದೆ.