`ಗೃಂಥಗಳು ಜನಸಾಮಾನ್ಯರ ಬದುಕಿಗೆ ದಾರೀದೀಪಗಳಾಗಿದೆ\’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಅಶೋಕೆಯ ವಿವಿವಿ ಆವರಣದಲ್ಲಿ ಅನಾವರಣ ಚಾತುಮಾಸ್ಯದ ಎರಡನೇ ದಿನ ಗುರುಗ್ರಂಥ ಮಾಲಿಕೆಯ ಅನಾವರಣ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು, `ವಿರಾಟ್ ವಿಶ್ವವಿದ್ಯಾಪೀಠದ ಮೂಲ ಆಶಯವೇ ಅಮೂಲ್ಯ ಗ್ರಂಥಗಳನ್ನು ಉಳಿಸುವುದಾಗಿದೆ\’ ಎಂದರು. ಕಾಲ ಎಂಬ ವಿಷಯದ ಬಗ್ಗೆ ಪ್ರವಚನ ಅವರು `ಕಾಲಕ್ಕೆ ಇರುವ ಶಕ್ತಿ ಬೇರಾರಿಗೂ ಇರಲಾರದು. ಸುಖ ಹಾಗೂ ದುಃಖ ಚಕ್ರವಿದ್ದಂತೆ\’ ಎಂದು ಹೇಳಿದರು.
`ಮಹಾಭಾರತ ಯುದ್ಧದಲ್ಲಿ ಎರಡೂ ಕಡೆಗಳ ಅಸಂಖ್ಯಾತ ಮಂದಿ ಸಾವನ್ನಪ್ಪಿದ ಘಟನೆಯನ್ನು ನೆನೆದು ಧರ್ಮರಾಯ ಪಶ್ಚಾತ್ತಾಪ ಪಡುತ್ತಾನೆ. ಮಕ್ಕಳು, ಮೊಮ್ಮಕ್ಕಳು, ಸೋದರರು, ಚಿಕ್ಕಪ್ಪ-ದೊಡ್ಡಪ್ಪಂದಿರು, ಹೆಣ್ಣು ಕೊಟ್ಟ ಮಾವಂದಿರು, ಸೋದರಮಾವ, ಗುರುಗಳು, ಅಜ್ಜಂದಿರು ಎಲ್ಲರನ್ನೂ ಸಿಂಹಾಸನಕ್ಕಾಗಿ ಸಾಯಿಸಿದೆ ಎಂದು ದುಃಖಿಸುತ್ತಾನೆ. ದೇಹ ಅಳಿದುಹೋಗುವಂಥ ತಪಸ್ಸು ಮಾಡುತ್ತೇನೆ ಎಂಬ ನಿರ್ಧಾರಕ್ಕೆ ಬಂದ. ಅದರೆ ವಾಸ್ತವವಾಗಿ ಕಾಲ ಧರ್ಮರಾಜನಿಂದ ಎಲ್ಲವನ್ನೂ ಮಾಡಿಸಿರುತ್ತಾನೆ. ಪಾಪದ ಲವಲೇಶವೂ ಆತನಿಗೆ ತಟ್ಟುವುದಿಲ್ಲ\’ ಎಂದರು.