ಶಿರಸಿ: `ಯುವ ವೈದಿಕರು ಹೆಚ್ಚೆಚ್ಚು ವೈದಿಕ ಗೋಷ್ಠಿಗಳಲ್ಲಿ ಪಾಲ್ಗೊಳ್ಳಬೇಕು\’ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಗಂಗಾಧರೇoದ್ರ ಸರಸ್ವತೀ ಮಹಾ ಸ್ವಾಮೀಜಿ ಹೇಳಿದರು.
ಅವರು ಸೋಮವಾರ ಸ್ವರ್ಣವಲ್ಲೀಯಲ್ಲಿ ನಡೆದ ವೈದಿಕ ಗೋಷ್ಠಿ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.
`ವೈದಿಕ ಗೋಷ್ಠಿಗಳಲ್ಲಿ ಭಾಗವಹಿಸುವುದರಿಂದ ವೈದಿಕ ಕರ್ಮಗಳಲ್ಲಿ ಅನೇಕ ತಪ್ಪು ಹೆಜ್ಜೆಗಳನ್ನು ಇಡುವುದು ತಪ್ಪುತ್ತದೆ. ಕರ್ಮಗಳನ್ನು ಶಾಸ್ತ್ರೀಯವಾಗಿ ನಡೆಸಲು ವೈದಿಕರು ಶಕ್ತರಾಗುತ್ತಾರೆ\’ ಎಂದರು. `ಘೋಷ್ಠಿಗಳಿಂದ ಸಮಾಜವು ಧರ್ಮ ಮಾರ್ಗದಿಂದ ವಿಮುಖ ಹೊಂದುತ್ತಿರುವದನ್ನು ತಪ್ಪಿಸಬಹುದು. ಇಂತಹ ಗೋಷ್ಠಿಗಳು ಒಳ್ಳೆಯ ಸಾಧನ. ಒಟ್ಟಿಗೆ ಸೇರಿ ನಿರಂತರವಾಗಿ ಚಿಂತನೆ ಮಾಡುವುದರ ಮೂಲಕ ಅನೇಕ ಗೊಂದಲಗಳನ್ನು ನಿವಾರಿಸಿಕೊಳ್ಳಲು ಸಾಧ್ಯ\’ ಎಂದರು.
ಸ್ವರ್ಣವಲ್ಲೀ ಮಠದ ಶ್ರೀಆನಂದಬೋಧೇoದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ನೀಡಿದ್ದರು.