ಯಲ್ಲಾಪುರ: ಹುಬ್ಬಳ್ಳಿ ಬಳಿಯ ಬ್ರಹ್ಮ ಚೈತನ್ಯ ಸ್ಥಿರಪಾದುಕಾಶ್ರಮದ ಅವದೂತ ಮಹಾರಾಜರ ಮಂದಿರದಲ್ಲಿ ಯಲ್ಲಾಪುರದ ಬಿಸಗೋಡಿನ ಶ್ರೀ ವೀರಾಂಜನೇಯ ಮಹಿಳಾ ತಾಳಮದ್ದಲೆ ಕೂಟದವರು `ಸುಧನ್ವ ಮೋಕ್ಷ\’ ಎಂಬ ತಾಳಮದ್ದಲೆ ಪ್ರದರ್ಶಿಸಿದರು.
ಗುರು ಪೂರ್ಣಿಮೆ ಅಂಗವಾಗಿ ಮಹಿಳೆಯರು ಈ ಸೇವೆ ನೆರವೇರಿಸಿದರು. ಮಹಿಳೆಯರ ಯಕ್ಷ ತಾಳಮದ್ದಲೆ ಅಚ್ಚುಕಟ್ಟಾಗಿ ಮೂಡಿಬಂದಿದ್ದು, ಜನರನ್ನು ರಂಜಿಸಿತು. ಸುಮಾ ಭಟ್ಟ, ಮೀನಾಕ್ಷಿ ಭಟ್, ನಯನಾ ಭಟ್, ವೀಣಾ ಭಟ್ ಹಾಗೂ ಪಾರ್ವತಿ ಭಟ್ ಈ ತಾಳಮದ್ದಲೆ ನೆರವೇರಿಸಿಕೊಟ್ಟರು.