1902ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್ ರಾಜಮನೆತನದ ಪುರೋಹಿತರಾದ ಜಯರಾಂ ಭಟ್ ಸಪ್ರೆ ಎಂಬಾತರು ಗೋಕರ್ಣಕ್ಕೆ ಆಗಮಿಸಿದ್ದರು. ಅವರು ಇಲ್ಲಿ ವೇದವ್ಯಾಸ ಮಾಡಿ, ಮಹಾರಾಷ್ಟ್ರ ಪದ್ಧತಿಯ ಋಗ್ವೇದವನ್ನು ಅನೇಕರಿಗೆ ಕಲಿಸಿದ್ದರು. ಆ ತಪಸ್ವಿಗಳ ನೆನಪಿನಲ್ಲಿ ಈಗಲೂ ಶ್ರೀ ಕ್ಷೇತ್ರದಲ್ಲಿ ಅವರ ಪೂಜೆ ನಡೆಯುತ್ತದೆ.
1092ರಲ್ಲಿ ಜಯರಾಂ ಭಟ್ಟ ಸಪ್ರೆ ಅವರು 24 ಲಕ್ಷ ಗಾಯತ್ರಿ ಮಂತ್ರದ ಅನುಷ್ಟಾನವನ್ನು ಗೋಕರ್ಣದಲ್ಲಿ ನೆರವೇರಿಸಿದ್ದರು. ವೇದಬ್ರಹ್ಮ ದೈವರಾತರಿಗೆ ಸಹ ಅವರು ಪಾಠ ಮಾಡಿದ್ದರು. ಕೊನೆಗೆ ಜೈಯರಾಂ ಭಟ್ಟರು ಇಲ್ಲಿಯೇ ಮುಕ್ತಿಯಾಗಿದ್ದು, ಈ ಗುರುಮೂರ್ತಿ ಕಟ್ಟೆಯಲ್ಲಿ ಪ್ರತಿ ಆಶಾಡ ಹುಣ್ಣಿಮೆ ದಿನ ವಿಶೇಷ ಪೂಜೆ ನಡೆಯುತ್ತದೆ. ರಥಬೀದಿಯಲ್ಲಿರುವ ಪ್ರಸಾದ ಮನೆಯಲ್ಲಿ ಈ ಪುಣ್ಯಸ್ಥಳವಿದೆ.
24 ಲಕ್ಷ ಗಾಯಿತ್ರಿ ಅನುಷ್ಠಾನ ನೆರವೇರಿಸಿದ ಕೆರೆ ಮಾರ್ಕಂಡೇ ಮನೆತನದ ಮನೆಯಲ್ಲಿ ಸಹ ಜಯರಾಂ ಭಟ್ಟರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಗುತ್ತದೆ. ಊರಿನ ಹಿರಿಯ ವೇದ ವಿದ್ವಾಂಸರು ಆಗಮಿಸಿ ವೇದಘೋಷಗಳ ಮೂಲಕ ಗುರುವಂದನೆ ಸಲ್ಲಿಸುತ್ತಾರೆ. ಗುರು ಪೂರ್ಣಿಮೆ ದಿನವಾದ ಭಾನುವಾರ ಇಲ್ಲಿ ವಿಶೇಷ ಪೂಜೆ ನಡೆದಿದ್ದು, ಗುರು ಪರಂಪರೆಯ ಅಪರೂಪದ ಕಾರ್ಯಕ್ರಮಕ್ಕೆ ನೂರಾರು ಜನ ಸಾಕ್ಷಿಯಾದರು.