ಯಲ್ಲಾಪುರ: ಸೋಮವಾರ ಮಧ್ಯಾಹ್ನ ಆರ್ತಿಬೈಲ್ ಘಟ್ಟದ ಹೆಬ್ಬಾರ್ ಕ್ರಾಸಿನ ಬಳಿ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ರಾಘವೇಂದ್ರ ಮಹಾಬಲೇಶ್ವರ ಘಟ್ಟಿ (45) ಎಂಬಾತರು ಸಾವನಪ್ಪಿದ್ದಾರೆ.
ಜುಲೈ 22ರಂದು ಮಧ್ಯಾಹ್ನ 2ಗಂಟೆಗೆ ಧಾರವಾಡದ ಅರ್ಜುನ ಕೆರಕನವರ್ ಎಂಬಾತ ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆ ಚಲಾಯಿಸಿಕೊಂಡು ಬರುತ್ತಿದ್ದ ಟಾಟಾ ಎಂಟ್ರಾ ವಾಹನ ಇಡಗುಂದಿ ಜನತಾ ಕಾಲೋನಿಯಲ್ಲಿ ವಾಸವಾಗಿದ್ದ ರಾಘವೇಂದ್ರ ಘಟ್ಟಿ ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟಿಗೆ ಡಿಕ್ಕಿಯಾಗಿತ್ತು. ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್ಟೆಕ್ ಮಾಡುವುದಕ್ಕಾಗಿ ವೇಗವಾಗಿ ಗಾಡಿ ಓಡಿಸಿದ ಟಾಟ ಎಂಟ್ರಾ ವಾಹನದ ಚಾಲಕ ಸ್ಕೂಟಿಗೆ ಗುದ್ದಿದ್ದರಿಂದ ರಾಘವೇಂದ್ರ ಘಟ್ಟಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಗಾಯಗೊಂಡವರನ್ನು ಯಲ್ಲಾಪುರ ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಗೆ ಕರೆದೊಯ್ಯುವಾಗ ಸಾವನಪ್ಪಿದ್ದಾರೆ.