
ಹಳಿಯಾಳ: ಹುಣಸೆವಾಡದ ಕೃಷ್ಣ ಮಡಿವಾಳ ಅವರ ಮನೆಯಲ್ಲಿ ಚಿನ್ನ ಕಳ್ಳತನವಾಗಿದೆ.
ಜುಲೈ 21 ರಾತ್ರಿ ಈ ಕಳ್ಳತನ ನಡೆದಿದ್ದು, ಜುಲೈ 22ರ ಬೆಳಗ್ಗೆ 7 ಗಂಟೆಗೆ ಮನೆ ಮಾಲಕರಿಗೆ ವಿಷಯ ಗೊತ್ತಾಗಿದೆ. ಮನೆ ಮುಂದಿನ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಇದರ ಜೊತೆ ಬೆಳ್ಳಿ ಸಾಮಗ್ರಿಗಳು ಸಹ ನಾಪತ್ತೆಯಾಗಿದೆ. ಒಟ್ಟು 92500ರೂ ಮೌಲ್ಯದ ಆಭರಣಗಳು ಕಳುವಾಗಿದ್ದು, ಅದನ್ನು ಹುಡುಕಿಕೊಡುವಂತೆ ಕೃಷ್ಣ ಮಡಿವಾಳ ಪೊಲೀಸರಿಗೆ ದೂರು ನೀಡಿದ್ದಾರೆ.