ಶಿರಸಿ: ಹಾಲು ಹಾಗೂ ಹಾಲಿನ ಉತ್ಪನ್ನ ಸಾಗಿಸುತ್ತಿದ್ದ ವಾಹನಕ್ಕೆ ಎಮ್ಮೆ ಅಡ್ಡ ಬಂದಿದ್ದು, ಅಪಘಾತ ತಪ್ಪಿಸಲು ಹೋದ ಹಾಲಿನ ವಾಹನ ಅಪಘಾತಕ್ಕೆ ಒಳಗಾಗಿದೆ.
ಜುಲೈ 20ರಂದು ಮೈಸೂರಿಗೆ ಹೋಗಿದ್ದ ಹಾವೇರಿಯ ಮಹಮದ್ ಇಸಾಕ್ ಎಂಬಾತ ಅಲ್ಲಿನ ನಾಗರಾಜ ಮಿಲ್ಕ್ ಯೂನಿಯನ್\’ನಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ತಂದಿದ್ದ. ಅದನ್ನು ಗೋವಾಗೆ ತಲುಪಿಸುವುದು ಆತನ ಕೆಲಸವಾಗಿತ್ತು. ಜುಲೈ 21 ಬನವಾಸಿಯ ನರೂರು ರಸ್ತೆಯಲ್ಲಿ ವಾಹನಕ್ಕೆ ಅಡ್ಡಲಾಗಿ ಎಮ್ಮೆ ಬಂದಿದ್ದು, ಅದನ್ನು ತಪ್ಪಿಸುವಾಗ ಇಡೀ ವಾಹನ ಪಲ್ಟಿಯಾಗಿದೆ. ಪರಿಣಾಮ ವಾಹನದಲ್ಲಿದ್ದ ಹಾಲು ಹಾಗೂ ಹಾಲಿನ ಉತ್ಪನ್ನಗಳು ರಸ್ತೆಯಲ್ಲಿ ಬಿದ್ದಿದ್ದವು.
ನಂತರ ಆಹಾರ ಪದಾರ್ಥವನ್ನು ಬೇರೆ ವಾಹನದಲ್ಲಿ ಸಾಗಿಸಲಾಯಿತು. ಹಾಲಿನ ವಾಹನದಲ್ಲಿದ್ದ ಅತುವುಲ್ಲಾ ಹಾಗೂ ಹಜರತ್ ಅಲಿ ಎಂಬಾತರು ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಯಿತು.