ಕಾರವಾರ: ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸುವ ಸದಾಶಿವಗಡ ಡಾ ನಯಿಮ್ ಮುಖಾದಮ ಅವರಿಗೆ `ವೈದ್ಯಶ್ರೀ\’ ಪ್ರಶಸ್ತಿ ದೊರೆತಿದೆ.
ಶಿವಾಜಿ ವಿದ್ಯಾ ಮಂದಿರದ ವಿದ್ಯಾರ್ಥಿಗಳು ಹಾಗೂ ಸದಾಶಿವಗಡ ಭಾಗದ ಬಡವರಿಗೆ ಡಾ ನಯಿಮ್ ಮುಖಾದಮ ಅವರು ಕಳೆದ ಅನೇಕ ವರ್ಷಗಳಿಂದ ಉಚಿತ ಆರೋಗ್ಯ ಸೇವೆ ಒದಗಿಸುತ್ತಿದ್ದಾರೆ. ಅವರ ಈ ಸೇವೆ ಗುರುತಿಸಿ ಅಸ್ನೋಟಿ ಶಿವಾಜಿ ವಿದ್ಯಾ ಮಂದಿರ ಈ ಪ್ರಶಸ್ತಿ ನೀಡಿ ಗೌರವಿಸಿದೆ.
ಶಿರಸಿ ಅರ್ಬನ್ ಬ್ಯಾಂಕ್ ಸದಾಶಿವಗಡ ವ್ಯವಸ್ಥಾಪಕ ಗಜಾನನ ಐಗಳ ಅವರು ಈ ಪ್ರಶಸ್ತಿ ನೀಡಿ ಸನ್ಮಾನಿಸಿದರು. ಶಾಲಾ ಮುಖ್ಯಾಧ್ಯಾಪಕ ದಿನೇಶ್ ಗಾಂವಕರ, ಪ್ರಮುಖರಾದ ವಿಠ್ಠಲ ನಾಯಕ, ಜಯಶೀಲಾ ಓಲೇಕಾರ, ಅಬ್ದುಲ್ಲಾ ಮುಖಾದಮ್, ಸಂತೋಷ ಕಾಂಬಳೆ, ಗಣೇಶ ಬೀಷ್ಟಣ್ಣನವರ್ ಇತರರು ಇದ್ದರು.