ಸಿದ್ದಾಪುರ: ಚಲಿಸುತ್ತಿದ್ದ ಬಸ್ಸಿನಿಂದ ಕೆಳಗೆ ಬಿದ್ದ ತ್ಯಾಗಲಿಯ ಹಂಗಾರಖoಡದ ಮೋಹನ ನಾಯ್ಕ (60) ಸಾವನಪ್ಪಿದ್ದಾರೆ.
ಜುಲೈ 22ರಂದು ಶಿರಸಿಯಿಂದ ಸಿದ್ದಾಪುರ ಕಡೆ ಹೊರಟಿದ್ದ ಬಸ್ಸಿನಲ್ಲಿ ಮೋಹನ್ ನಾಯ್ಕ ಕುಳಿತಿದ್ದರು. ಈ ಬಸ್ಸಿನ ಬಾಗಿಲನ್ನು ನಿರ್ವಾಹಕ ಸತೀಶ ಮಡಿವಾಳ ಸರಿಯಾಗಿ ಹಾಕಿರಲಿಲ್ಲ. ಕಾನಸೂರು ತಿರುವಿನ ಹೊಂಡದಲ್ಲಿ ಬಸ್ಸನ್ನು ಚಾಲಕ ಸಿದ್ದೇಶ ಎಸ್ ಹೊಂಡಕ್ಕೆ ಹಾರಿಸಿದ್ದು, ಆಗ ಬಸ್ಸಿನ ಒಳಗಿದ್ದ ಮೋಹನ್ ನಾಯ್ಕ ಬಾಗಿಲಿನಿಂದ ಹೊರಬಿದ್ದಿದ್ದಾರೆ.
ಅವರ ತಲೆ ನೆಲಕ್ಕೆ ಅಪ್ಪಳಿಸಿದ್ದರಿಂದ ಗಾಯಗೊಂಡಿದ್ದಾರೆ. ಕಾನಸೂರು ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಕೊಡಿಸಿ, ನಂತರ ಶಿರಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. `ಈ ಸಾವಿಗೆ ಬಸ್ ಚಾಲಕ ಹಾಗೂ ನಿರ್ವಾಹಕರ ನಿರ್ಲಕ್ಷ್ಯ ಕಾರಣ\’ ಎಂದು ಮೋಹನರ ಮಗ ಮಹೇಶ್ ಪೊಲೀಸರಿಗೆ ದೂರಿದ್ದಾರೆ.