ಕಾರವಾರ, ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಜುಲೈ 24ರಂದು ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಆಗಲಿದೆ. ಈ ಮೂರು ತಾಲೂಕುಗಳಲ್ಲಿ ವಿದ್ಯುತ್ ತಂತಿ ನಿರ್ವಹಣೆ, ಬ್ಯಾಟರಿ ನಿರ್ವಹಣೆ ಹಾಗೂ ಪರಿವರ್ತಕ ಸರಿಪಡಿಸುವಿಕೆ ಕಾರಣದಿಂದ ವಿದ್ಯುತ್ ಸರಬರಾಜು ಸಾಧ್ಯವಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಕಾರವಾರದ ನಂದನಗದ್ದಾ ಪ್ರದೇಶದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ಗಂಟೆಯವರಿಗೆ ವಿದ್ಯುತ್ ಸಂಪರ್ಕ ಕಡಿತವಾಗಲಿದೆ. ಈ ವೇಳೆ ಸುಂಕೇರಿ, ತೇಲಂಗ್ ರೋಡ್, ಕೆಎಚ್ಬಿ ಕಾಲೋನಿಯಲ್ಲಿ ಸಹ ವಿದ್ಯುತ್ ಇರುವುದಿಲ್ಲ.
ಹೊನ್ನಾವರ 110 ಕೆವಿ ವಿದ್ಯುತ್ ವಿತರಣಾ ಉಪ-ಕೇಂದ್ರದಲ್ಲಿ ಬ್ಯಾಟರಿ ಚಾರ್ಜರ್ ಬದಲಾವಣೆ ಕೆಲಸವಿರುವುದರಿಂದ ಹೊನ್ನಾವರ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಜುಲೈ 24ರಂದು ವಿದ್ಯುತ್ ಸರಬರಾಜು ಇರುವುದಿಲ್ಲ. ಇಲ್ಲಿ ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ವಿದ್ಯುತ್ ಸಂಪರ್ಕ ಕಡಿತವಾಗಲಿದೆ.
ಇನ್ನೂ ಕುಮಟಾದ ಉಪ ವಿಭಾಗ ವ್ಯಾಪ್ತಿಯಲ್ಲಿ ಪರಿವರ್ತಕ ನಿರ್ವಹಣಾ ಕೆಲಸದ ಕಾರಣ ಬೆಳಗ್ಗೆ 9.30ಕ್ಕೆ ವಿದ್ಯುತ್ ಸಂಪರ್ಕ ಕಡಿತವಾಗಲಿದೆ. ಮಧ್ಯಾಹ್ನ 3.30ರವರೆಗೆ ಕೈಗಾರಿಕಾ ವಲಯ, ವಾಲಗಳ್ಳಿ, ಕತಗಾಲ, ಮಿರ್ಜಾನ ಮತ್ತು ಹೆಗಡೆ ಫೀಡರಿನ ಎಲ್ಲಾ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಲಿದೆ. ಇದರೊಂದಿಗೆ ಸಂತೆಗುಳಿ, ಕಲ್ಲಬ್ಬೆ, ಹೊದ್ಕೆ-ಶಿರೂರು, ಕೂಜಳ್ಳಿ, ಉಳ್ಳೂರುಮಠ ಹಾಗೂ ಮೂರುರು ಫೀಡರಿನ ವ್ಯಾಪ್ತಿಯ ಹಳ್ಳಿಗಳಲ್ಲಿ ಸಹ 9.30 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ.