ಯಲ್ಲಾಪುರ: ಹಳಿಯಾಳ ತಿರುವಿನಲ್ಲಿ ಬೈಕ್ ಸವಾರನ ಮೇಲೆ ಮರ ಬಿದ್ದಿದೆ.
ಕಿರವತ್ತಿಯ ದೊಡ್ಲಾ ಹಾಲು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಲಕ್ಷ್ಮಣ ಬಾಂದೇಕರ (44) ಜುಲೈ 23ರ ಸಂಜೆ ಯಲ್ಲಾಪುರದಿಂದ ಕಿರವತ್ತಿ ಕಡೆ ಹೊರಟಿದ್ದರು. ಆಗ ಮಾರುತಿ ಬಾಂದೇಕರ್ ಅವರ ಮೈಮೇಲೆ ಮರ ಮುರಿದುಬಿದ್ದಿದೆ. ಮರ ಮುರಿದ ರಭಸಕ್ಕೆ ಅವರು ಧರಿಸಿದ ಹೆಲ್ಮೆಟ್ ಒಡೆದು ಹೋಗಿದ್ದು, ಮಾರುತಿ ಅವರ ತಲೆಗೆ ಸ್ವಲ್ಪ ಪೆಟ್ಟಾಗಿದೆ. ಜೊತೆಗೆ ಕೈ-ಕಾಲುಗಳಿಗೆ ಸಹ ಗಾಯವಾಗಿದೆ.
ಪೊಲೀಸರು ಆಗಮಿಸಿ ಗಾಯಾಳುವನ್ನು ಉಪಚರಿಸಿದರು. ನಂತರ ಆಂಬುಲೆನ್ಸ್ ಮೂಲಕ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಗೊಂಡ ಬೈಕ್ ಸವಾರ ಮಾರುತಿ ಬಾಂದೇಕರ್ ಕಲಘಟಗಿಯ ಕಂದ್ಲಿ ಗ್ರಾಮದವರು.