
ಅಂಕೋಲಾ: ಹಟ್ಟಿಕೇರಿಯ ಬಾಬು ಗ್ಯಾರೇಜ್ ಬಳಿ ನಡೆದು ಹೋಗುತ್ತಿದ್ದ ಗೇನು ಶೇಷು ನಾಯ್ಕ (74) ಎಂಬಾತರಿಗೆ ವೀಕ್ಷಿತ ವೆಂಕಟದಾಸ ನಾಯ್ಕ (20) ಎಂಬಾತ ಬೈಕ್ ಗುದ್ದಿದ್ದರಿಂದ ಗೇನು ಶೇಷು ನಾಯ್ಕ ಸಾವನಪ್ಪಿದ್ದಾರೆ.
ಜೂನ್ 26ರಂದು ಮಾವಿನಕೇರಿಯ ವಿದ್ಯಾರ್ಥಿ ವೀಕ್ಷಿತ ನಾಯ್ಕ ಗೇನು ನಾಯ್ಕ ಅವರಿಗೆ ಬೈಕ್ ಗುದ್ದಿದ್ದ. ಗೇನು ನಾಯ್ಕ ಜೊತೆ ಬೈಕಿನ ಹಿಂದೆ ಕೂತಿದ್ದ ಅವರ್ಸಾ ತಾರಿಬಾಗಿಲಿನ ನಾಗೇಶ ಮೇತ್ರಿ (24) ಸಹ ಗಾಯಗೊಂಡಿದ್ದ. ಗoಭೀರ ಗಾಯಗೊಂಡ ಗೇನು ನಾಯ್ಕರನ್ನು ಅಂಕೋಲಾ, ಕಾರವಾರ ನಂತರ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನಂತರ ಮತ್ತೆ ಕಾರವಾರ ಜಿಲ್ಲಾಸ್ಪತ್ರೆಗೆ ತಂದು ಚಿಕಿತ್ಸೆ ಕೊಡಲಿಸಲಾಗಿತ್ತು. ಆದರೆ, ಜುಲೈ 23ರ ರಾತ್ರಿ ಅವರು ಸಾವನಪ್ಪಿದ್ದಾರೆ.