ಸಿದ್ದಾಪುರ: ತಾರ್ಸಿಯ ಕಡಗೇರಿ ಉಮೇಶ ನಾರಾಯಣ ನಾಯ್ಕ ಅವರ ಮನೆಯಲ್ಲಿ ಅಡಿಕೆ ಕಳ್ಳತನವಾಗಿದೆ.
ಮನೆಯ ಹೊರಗೆ ಇಟ್ಟಿದ್ದ 2 ಚೀಲ ಚಿಪ್ಪೆಗೋಟು ಅಡಿಕೆಯನ್ನು ಕಳ್ಳರು ಅಪಹರಿಸಿದ್ದಾರೆ. ಜುಲೈ 22ರ ರಾತ್ರಿ ಈ ಕಳ್ಳತನ ನಡೆದಿದ್ದು, ಮರುದಿನ ಬೆಳಗ್ಗೆ ಮನೆಯವರಿಗೆ ಗೊತ್ತಾಗಿದೆ. ಒಟ್ಟು 80 ಕೆಜಿ ಅಡಿಕೆ ಕಳ್ಳತನವಾಗಿದ್ದು, ಇದರಿಂದ 18 ಸಾವಿರ ರೂ ನಷ್ಟವಾಗಿದೆ ಎಂದು ಅವರು ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಇದೀಗ ಆ ವೇಳೆ ಅಲ್ಲಿ ಸಂಚಾರ ನಡೆಸಿದವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.