ಬುಧವಾರ ಮಧ್ಯಾಹ್ನ ಮರ ಬಿದ್ದ ಪರಿಣಾಮ ಶಿರಸಿ-ಯಲ್ಲಾಪುರ ರಸ್ತೆ ಸಂಚಾರ ಹದಗೆಟ್ಟಿದ್ದು, ವಾಹನಗಳು ಸಾಲುಗಟ್ಟಿ ನಿಂತಿದ್ದವು.
ತೂಕದಬೈಲ್ ಬಸ್ ನಿಲ್ದಾಣದ ಬಳಿಯ ಘಟ್ಟ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಮರ ಬಿದ್ದಿದೆ. ಮರ ತೆರವು ಕಾರ್ಯಾಚರಣೆ ನಡೆದಿದ್ದು, ಸಂಜೆ 5.30ರ ವೇಳೆಗೆ ಸಂಚಾರ ಸುಗಮವಾಗಿದೆ. ಬೆಳಗ್ಗೆ ಸಹ ಮಂಚಿಕೇರಿಯ ಮಾಳಕೊಪ್ಪ ಬಳಿ ಮರ ಬಿದ್ದಿದ್ದು, ಒಬ್ಬರು ಸಾವನಪ್ಪಿದ್ದರು.