ಸಿದ್ದಾಪುರ: ಬುಧವಾರ ವ್ಯಾಪಕವಾಗಿ ಸುರಿದ ಮಳೆ ಹಾಗೂ ರಭಸವಾಗಿ ಬೀಸಿದ ಗಾಳಿಗೆ ನೆಜ್ಜೂರಿನ ಅಹ್ಮದ್ ಖಾನ್ ಅವರ ಮನೆ ಮುರಿದಿದೆ.
ಮನೆಯಲ್ಲಿ ವಾಸವಿದ್ದ ಮೂವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಖಿಲಿಲ್ ಖಾನ್ (65) ಸಾಗರದ ಆಸ್ಪತ್ರೆಗೆ, ಅಯನ್ ಖಾನ್ (11) ಶಿಮವೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಹಾಗೂ ಆಯೂಬ್ ಖಾನ್ (9) ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.