ಮುಂಡಗೋಡ: ಮಳಗಿ ಬಳಿಯಿರುವ ಧರ್ಮಾ ಜಲಾಶಯ ನೋಡಲು ಹೋಗಿದ್ದ ಶ್ರೀನಾಥ ಎಂಬಾತ ನೀರು ಪಾಲಾಗಿದ್ದಾನೆ.
ಮುಡಸಾಲಿಯ ಈತ ತನ್ನ ಸ್ನೇಹಿತ ಪೀರಪ್ಪ ಜೊತೆ ಜಲಾಶಯ ನೋಡಲು ತೆರಳಿದ್ದ. ಜಲಾಶಯದ ಹತ್ತಿರ ಹೋಗದಂತೆ ಸೂಚಿಸಿದರೂ ಮುಂದೆ ತೆರಳಿದ್ದು, ಆತ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಈತನ ಜೊತೆಯಿದ್ದ ಪೀರಪ್ಪನನ್ನು ಅಲ್ಲಿದ್ದ ಜನ ರಕ್ಷಿಸಿದ್ದಾರೆ.
ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ನಾಪತ್ತೆಯಾದವನ ಹುಡುಕಾಟ ನಡೆಸಿದ್ದಾರೆ.