ಬುಧವಾರ ಸಂಜೆಯಿoದ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಹೆದ್ದಾರಿ ಕುಸಿದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು, ಇದು ಸತ್ಯವಲ್ಲ.
ಅರಬೈಲ್ ಘಟ್ಟದಲ್ಲಿ ಎಲ್ಲಿಯೂ ಹೆದ್ದಾರಿ ಕುಸಿತ ಆಗಿಲ್ಲ. ರಸ್ತೆ ಸಂಚಾರ ಸರಿಯಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಕೆಲ ಕಿಡಿಗೇಡಿಗಳು ಜನರಲ್ಲಿ ಗೊಂದಲ ಮೂಡಿಸುವುದಕ್ಕಾಗಿ `ಹುಬ್ಬಳ್ಳಿ ಅಂಕೋಲಾ ಹೆದ್ದಾರಿ ಸಂಚಾರ ಸ್ಥಗಿತ – ಅರಬೈಲ್ ಘಟ್ಟದಲ್ಲಿ ಹೆದ್ದಾರಿ ಕುಸಿತ\’ ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಇದರ ಜೊತೆ ಹಳೆಯ ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ಯಲ್ಲಾಪುರ ಪೊಲೀಸರು ಬುಧವಾರ ಅರಬೈಲ್ ಘಟ್ಟದಲ್ಲಿ ಯಾವುದೇ ಕುಸಿತ ಆಗಿಲ್ಲ ಎಂದು ತಿಳಿಸಿದ್ದಾರೆ.
ಪೊಲೀಸರು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬರುವ ವಿಷಯಗಳನ್ನು ಗಮನಿಸುತ್ತಿದ್ದು, ಈ ರೀತಿ ಸುಳ್ಳು ಸುದ್ದಿ ಹರಡುವವರ ವಿರುದ್ಧ 9480805200ಗೆ ಸಾರ್ವಜನಿಕರು ಸಹ ಮಾಹಿತಿ ಕೊಡಬಹುದಾಗಿದೆ.
`ಸುಳ್ಳು ಮಾಹಿತಿ ಡಿಲಿಟ್ ಮಾಡಿ. ಸತ್ಯವನ್ನು ಶೇರ್ ಮಾಡಿ\’