ಹೊನ್ನಾವರ: ಬೆಂಗಳೂರಿನ ಕೋರಮಂಗಲದಲ್ಲಿ ನಡೆದ ಅಂತರ್ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಹಳದಿಪುರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ಶಾಲೆಯ ವಿದ್ಯಾರ್ಥಿಗಳಾದ ರಜತ್ ಮಂಜುನಾಥ್ ನಾಯ್ಕ, ವಿದ್ಯಾಶ್ರೀ ಈಶ್ವರ ಗೌಡ, ಶ್ರೀನಿಧಿ ಸತೀಶ್ ರೇವಣಕರ್, ಸಮಿಕ ಚಂದ್ರಕಾoತ ಹರಿಕಾಂತ ವಿಜೇತರಾಗಿದ್ದಾರೆ. ಹರ್ಷ ಮಹೇಶ ಹರಿಕಾಂತ, ಟ್ರೆಡಿಷನಲ್ ಯೋಗಾಸನ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ, ಐಚ್ಛಿಕ ಯೋಗಾಸನ ಸ್ಪರ್ಧೆ ಎಂಟನೇ ಸ್ಥಾನ, ನಿಕಿತಾ ನಾಗೇಶ್ ಹರಿಕಾಂತ ಟ್ರೆಡಿಷನಲ್ ಯೋಗ ಸ್ಪರ್ಧೆಯಲ್ಲಿ ಹತ್ತನೇ ಸ್ಥಾನ, ಅನಂತ ಮಂಜುನಾಥ ಗೌಡ ಟ್ರೆಡಿಷನಲ್ ಯೋಗಾಸನ ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದು ಟಾಪ್ ಟೆನ್ ಶ್ರೇಣಿಯಲ್ಲಿ ಆಯ್ಕೆಯಾಗಿದ್ದಾರೆ.