ಜೊಯಿಡಾದ ರಾಮನಗರದಿಂದ ಕೇರಳಕ್ಕೆ ತೆರಳುತ್ತಿದ್ದ ಮರದ ನಾಟಾ ಶಿರೂರು ಗುಡ್ಡ ಕುಸಿತದ ಪರಿಣಾಮ ಗಂಗಾವಳಿ ನದಿ ಪಾಲಾಗಿದ್ದು, ಅಂಕೋಲಾದ ಅಗ್ರಗೋಣದಲ್ಲಿ ಕೆಲ ನಾಟಾದ ತುಂಡುಗಳು ಪತ್ತೆಯಾಗಿದೆ.
ಜೂ 15ರಂದು ಲಾರಿಯಲ್ಲಿ ನಾಟಾ ತುಂಬಿಸಿಕೊ0ಡಿದ್ದ ಅರ್ಜುನ ಜು 16ರಂದು ಶಿರೂರು ತಲುಪಿದ್ದ. ಆಗ, ಗುಡ್ಡ ಕುಸಿತವಾಗಿ ಲಾರಿಸಹಿತ ನಾಟಾಗಳು ನದಿ ಪಾಲಾಗಿದೆ. ಲಾರಿ ನೀರಿನಲ್ಲಿ ಮುಳುಗಿದರೆ ಕೆಲ ನಾಟಾಗಳು ಅಲ್ಲಿಂದ ತೇಲಿ ಅಗ್ರಗೋಣದವರೆಗೆ ತಲುಪಿದೆ. ಲಾರಿಯನ್ನು ಮೇಲೆತ್ತುವ ಕಾರ್ಯಾಚರಣೆ ಇದೀಗ ನಡೆಯುತ್ತಿದೆ.