ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು ಕಳೆದ 24 ಗಂಟೆ ಅವಧಿಯಲ್ಲಿ 62 ಮನೆಗಳಿಗೆ ಹಾನಿಯಾಗಿದೆ.
52 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. 8 ಮನೆಗಳು ತೀವೃ ಹಾನಿಗೊಳಗಾಗಿದ್ದು, 1 ಮನೆ ಪೂರ್ಣ ಪ್ರಮಾಣದಲ್ಲಿ ನೆಲಸಮವಾಗಿದೆ. ಮಳೆಯಿಂದ ಸಂತ್ರಸ್ತರಾದವರ ಪೈಕಿ 205 ಜನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಒಟ್ಟು 4 ಕಾಳಜಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ. ಕಾರವಾರದಲ್ಲಿ 2, ಕುಮಟಾದಲ್ಲಿ 1 ಮತ್ತು ಅಂಕೋಲಾದ 1 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ.
ಮಳೆ ವರದಿ ಇಲ್ಲಿ ನೋಡಿ..
ಜಲಾಶಯಗಳ ನೀರಿನ ಮಟ್ಟ ಹೀಗಿದೆ…