ಕಾರವಾರ: `ವ್ಯಾಪಕ ಪ್ರಮಾಣದಲ್ಲಿನ ಕಡಲ ಕೊರತದಿಂದಾಗಿ ಸಮುದ್ರ ಭಾಗದಲ್ಲಿ ವಾಸಿಸುತ್ತಿರುವ ಜನರ ಆತಂಕ ಹೆಚಚಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಅಗತ್ಯ\’ ಎಂದು ಕರ್ನಾಟಕ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಜಯರಾಮ್ ರಾಯ್ಪುರ ಅಭಿಪ್ರಾಯಪಟ್ಟರು.
ಮಾಜಾಳಿ, ಸದಾಶಿವಗಡ ಮತ್ತು ಹಾರವಾಡದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಶಾಶ್ವತ ಪರಿಹಾರದ ಕುರಿತು ಚರ್ಚಿಸಿದರು.
`ಕರಾವಳಿ ದಿನೇ ದಿನೇ ಕಡಲ ಕೊರೆತ ಹೆಚ್ಚಾಗುತ್ತಿರುವ ಕಾರಣ ಸಮಸ್ಯೆ ಆಗುತ್ತಿದೆ. ಕಡಲ ಕೊರೆತ ಪರಿಹಾರಕ್ಕಾಗಿ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಆ ಮೂಲಕ ಸ್ಥಳೀಯರಿಗೂ ಅನುಕೂಲ ಮಾಡಿಕೊಡಬೇಕು\’ ಎಂದು ಸೂಚಿಸಿದರು. ಕರ್ನಾಟಕ ಜಲಸಾರಿಗೆ ಮಂಡಳಿಯ ನಿರ್ದೇಶಕ ಕ್ಯಾ. ಸಿ. ಸ್ವಾಮಿ, ಕರ್ನಾಟಕ ಜಲಸಾರಿಗೆ ಮಂಡಳಿಯ ಚೀಫ್ ಇಂಜಿನಿಯರ್ ಪ್ರಮೀತ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಸಾದ್ ಇದ್ದರು.