ಕುಮಟಾ: ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಜುಲೈ 26ರ ಶುಕ್ರವಾರ `ಯುವಾ ಬ್ರಿಗೇಡ್\’ ಮ್ಯಾರಥಾನ್ ಓಟ ಆಯೋಜಿಸಿದೆ.
ಮಾಸ್ತಿಕಟ್ಟೆ ದೇವಸ್ಥಾನದಿಂದ ಹಳೆ ಬಸ್ ನಿಲ್ದಾಣ, ಮಾರುಕಟ್ಟೆ ಶನಿ ದೇವಸ್ಥಾನ ರಸ್ತೆ ಮೂಲಕ ಸುಭಾಷ್ ರಸ್ತೆ, ಗಿಬ್ ಸರ್ಕಲ್\’ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಸೈನಿಕ ವಿಂಗ್ ಕಮಾಂಡರ್ ಗಣೇಶ ಶಾಸ್ತ್ರಿ ಅವರು ಮ್ಯಾರಥಾನ್\’ನಲ್ಲಿ ಓಡಲಿದ್ದಾರೆ. `ಭಾಗವಹಿಸುವ ಎಲ್ಲರಿಗೂ ಪ್ರೋತ್ಸಾಹಕ ಟಿ-ಶರ್ಟ ಹಾಗೂ ಸೈನಿಕರ ಸಹಿ ಹೊಂದಿದ ಪ್ರಮಾಣ ಪತ್ರ ನೀಡಲಾಗುತ್ತದೆ\’ ಎಂದು ಸಂಘಟಕ ಅಣ್ಣಪ್ಪ ನಾಯ್ಕ ತಿಳಿಸಿದ್ದಾರೆ.