ಯಲ್ಲಾಪುರ: 44 ವರ್ಷದ ದಲಿತ ಮಹಿಳೆ ಮೇಲೆ 46 ವರ್ಷದ ಹೆಮ್ಮಾಡಿಯ ಕೊಣನಗುಂಡಿ ಸತೀಶ ಕಾಂತಪ್ಪ ಪೂಜಾರಿ ಎಂಬಾತ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದು, ಸಂತ್ರಸ್ತ ಮಹಿಳೆ ಸಂಘಟನೆ ನೆರೆವು ಪಡೆದು ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ.
ಬಾಳೆಜಡ್ಡಿ ಆಗೇರ ಕಾಲೋನಿಯ ಮಹಿಳೆಯನ್ನು ಮದುವೆ ಆಗುವುದಾಗಿ ಪುಸಲಾಯಿಸಿದ ಸತೀಶ್ ಪೂಜಾರಿ 2022ರ ಜೂನ್ ಕೊನೆಯಲ್ಲಿ ಆಕೆಯ ಮೇಲೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಅದಾದ ನಂತರ ಸಹ ಸಾಕಷ್ಟು ಬಾರಿ ಲೈಂಗಿಕವಾಗಿ ಬಳಸಿಕೊಂಡಿದ್ದ.
2023ರ ನವೆಂಬರ್\’ನಲ್ಲಿ ಸಹ ಆತ ಅತ್ಯಾಚಾರ ನಡೆಸಿದ್ದು, ಇದರ ಪರಿಣಾಮ ಆಕೆ ಗರ್ಭಿಣಿಯಾಗಿದ್ದಳು. ನಂತರ ಸತೀಶನಲ್ಲಿ ಮದುವೆ ಆಗುವಂತೆ ಕೇಳಿಕೊಂಡಿದ್ದಳು. ಆದರೆ, ಆತ ಇದಕ್ಕೆ ಒಪ್ಪಿರಲಿಲ್ಲ. ಈ ಬಗ್ಗೆ ದಲಿತ ಸಂಘಟನೆಯವರನ್ನು ಸಂಪಕಿಸಿದ ಮಹಿಳೆ ಅವರ ನೆರವಿನಿಂದ ಪೊಲೀಸ್ ದೂರು ನೀಡಿದ್ದು, ತನಿಖೆ ಮುಂದುವರೆದಿದೆ.