ಶಿರೂರು ಗುಡ್ಡ ಕುಸಿತ ಅವಧಿಯಲ್ಲಿ ಅಲ್ಲಿಯೇ ಇದ್ದ ಎನ್ನಲಾದ ಗಂಗೆಕೊಳ್ಳದ ಲೋಕೇಶ (30)ನ ಬಗ್ಗೆ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ.
ಜುಲೈ 16ರಂದು ಈತ ಶಿರೂರು ಗುಡ್ಡದ ಕೆಳಗಿರುವ ಚಹದ ಅಂಗಡಿ ಬಳಿ ಬ್ಯಾಗ್ ಹಾಕಿಕೊಂಡು ನಿಂತಿರುವುದನ್ನು ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಗಂಗೆಕೊಳ್ಳದ ಬಸ್ ಚಾಲಕ ವಿನೋದ ನಾಯ್ಕ ನೋಡಿದ್ದು, ಅದಾದ ನಂತರ ಲೋಕೇಶನನ್ನು ನೋಡಿದವರಿಲ್ಲ. ಲೋಕೇಶನ ಜೊತೆ ಶಿರೂರು ಗುಡ್ಡದಲ್ಲಿ ಕಣ್ಮರೆಯಾದ ಜಗನ್ನಾಥ ಸಹ ಸಿಕ್ಕಿಲ್ಲ. ಅರ್ಜುನ ಹಾಗೂ ಸರ್ವನ್ ಎಂಬ ಲಾರಿ ಚಾಲಕರ ಹುಡುಕಾಟ ನಡೆದಿದ್ದು, ಶುಕ್ರವಾರ ದೊರೆತ ಅರ್ದ ದೇಹ ಸರ್ವನ್\’ದು ಎಂದು ಖಚಿತವಾಗಿದೆ.
ಪಲ್ಲವಿಗೆ ಉದ್ಯೋಗ ಭರವಸೆ
ಕಣ್ಮರೆಯಾದ ಜಗನ್ನಾಥರ ಮಗಳು ಪಲ್ಲವಿಗೆ ಲೋಕೋಪಯೋಗಿ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗ ಕೊಡಿಸುವುದಾಗಿ ಶಾಸಕ ಸತೀಶ್ ಸೈಲ್ ಭರವಸೆ ನೀಡಿದ್ದಾರೆ. ಆ ಭಾಗದಲ್ಲಿ ಕೆಡಿಸಿಸಿ ಬ್ಯಾಂಕ್ ಶುರುವಾಗಿದ್ದು, ಇನ್ನೊಬ್ಬರಿಗೆ ಅಲ್ಲಿ ಡಿ ಗ್ರೂಪ್ ನೌಕರಿ ಕೊಡಿಸುವ ಆಶ್ವಾಸನೆ ನೀಡಿದ್ದಾರೆ.