ಕಾರವಾರ: ವಕೀಲ ಪ್ರದೀಪ ತಾಂಡೇಲ ಅವರ ಕಚೇರಿಗೆ ನುಗ್ಗಿದ ವಿನಯಕ ತಾಂಡೇಲ್ ಎಂಬಾತ ಗಲಾಟೆ ಮಾಡಿದ್ದು, ಅವರಿಗೆ ಜೀವ ಬೆದರಿಕೆ ಒಡ್ಡಿದ್ದಾನೆ.
ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರದೀಪ ತಾಂಡೇಲ ನೋಟರಿಯಾಗಿಯೂ ಕಾರ್ಯ ನಿರ್ವಹಿಸುತ್ತಾರೆ. ಅವರಿಗೆ ಜುಲೈ 21ರಂದು ವಿನಾಯಕ ತಾಂಡೇಲ್ ಫೋನ್ ಮಾಡಿ ಬೆದರಿಕೆ ಒಡ್ಡಿದ್ದ. ಜುಲೈ 22ರಂದು ಕಚೇರಿಗೆ ಬಂದು ಗಲಾಟೆ ಮಾಡಿದ್ದ. ಈ ಬಗ್ಗೆ ಪ್ರದೀಪ ತಾಂಡೇಲ್ ಪೊಲೀಸ್ ದೂರು ನೀಡಿದ್ದಾರೆ.
ಆರೋಪಿತರ ವಿರುದ್ಧ ಕ್ರಮ ಅನಿವಾರ್ಯ ಎಂದು ವಕೀಲ ಸಂಘದ ಅಧ್ಯಕ್ಷ ಕೃಷ್ಣಾನಂದ ನಾಯ್ಕ, ಪ್ರಮುಖರಾದ ಎನ್.ಆರ್.ದೇಶಭಂಡಾರಿ, ದರ್ಶನ ಗೌಡ ಒತ್ತಾಯಿಸಿದ್ದಾರೆ.