ಮುಂಡಗೋಡ: ಪಟ್ಟಣದ ಹೊರವಲಯದಲ್ಲಿರುವ ಅಮ್ಮಾಜಿ ಕೆರೆ ತುಂಬಿದ್ದು, ಹೆಚ್ಚುವರಿ ನೀರು ಯಲ್ಲಾಪುರ ರಸ್ತೆಗೆ ಹರಿದಿದೆ. ಹೀಗಾಗಿ ಈ ಭಾಗದ ಸಂಚಾರ ಸಹ ಅಸ್ತವ್ಯಸ್ಥಗೊಂಡಿದೆ.
ಪ್ರತಿ ವರ್ಷ ಈ ಭಾಗದಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ದ್ವಿಚಕ್ರ ವಾಹನ ಸವಾರರು ಅನಿವಾರ್ಯವಾಗಿ ಅಪಾಯದಲ್ಲಿ ಸಂಚರಿಸುತ್ತಿದ್ದಾರೆ. ಈ ಬಗ್ಗೆ ಅರಿವಿದ್ದರೂ ಅಧಿಕಾರಿಗಳು ಅಪಾಯ ತಡೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಇದರ ಜೊತೆ ಯಲ್ಲಾಪುರ ರಸ್ತೆಯಿಂದ ತೇಗಿನಕೊಪ್ಪಕ್ಕೆ ಹೋಗುವ ಮಾರ್ಗದಲ್ಲಿನ ಕಿರು ಸೇತುವೆ ಮೇಲೆಯೂ ರಭಸದ ನೀರು ಹರಿಯುತ್ತಿದೆ. ಇಲ್ಲಿ ಅಲ್ಪ ಆಯತಪ್ಪಿದರೂ ಅಪಾಯ ತಪ್ಪಿದ್ದಲ್ಲ.