ಮುಂಡಗೋಡ: ದೊಡ್ಡಹಾರವಳ್ಳಿ ಭಾಗದ ಅರಣ್ಯದಲ್ಲಿ ಕಾಣಿಸುತ್ತಿದ್ದ ಚಿರತೆ ಸಾವನಪ್ಪಿದ್ದು, ಗುರುವಾರ ಅಲ್ಲಿ ಹರಿದಿರುವ ಹಳ್ಳದಲ್ಲಿ ಅದರ ಶವ ತೇಲಿ ಬಂದಿದೆ.
2.5 ವರ್ಷದ ಗಂಡು ಚಿರತೆ ಇದಾಗಿದ್ದು, ದೇಹ ಕೊಳೆತಿರುವುದನ್ನು ನೋಡಿ 7 ದಿನಗಳ ಹಿಂದೆ ಸಾವನಪ್ಪಿರುವ ಬಗ್ಗೆ ಅಂದಾಜಿಸಲಾಗಿದೆ. ದೇಹದ ಮೇಲೆ ಹುಳಗಳಾಗಿವೆ. ಪಶುವೈದ್ಯರು ಆಗಮಿಸಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಹಳ್ಳದ ನೀರಿನ ರಭಸಕ್ಕೆ ಚಿರತೆ ಸಾವನಪ್ಪಿದ ಅನುಮಾನಗಳಿದ್ದು, ನಿಖರ ಮಾಹಿತಿ ಗೊತ್ತಾಗಿಲ್ಲ.