ಶಿರಸಿ: ಸುರಿದ ಧಾರಾಕಾರ ಮಳೆಗೆ ನೈಗಾರ ಗ್ರಾಮದ ಹಾಸಣಗಿ ಮಜಿರೆಯ ಹುಲಿಯಾ ಗೌಡ ಅವರ ಮನೆ ಮೇಲ್ಚಾವಣಿ ಮುರಿದಿದೆ.
ಮಣದೂರು ಗ್ರಾಮದ ಶಿರ್ಲಬೈಲ್ ಕಮಲಾಕರ ಗೌಡ ಅವರ ಮನೆಯ ಛಾವಣಿ ಹಾರಿ ಹೋಗಿದೆ. ಸಂಪಖAಡ ಮತ್ತು ಹುಲೇಕಲ್ ಹೋಬಳಿಯ ತೋಟಗಳಿಗೆ ನೀರು ನುಗ್ಗಿ ಅಡಿಕೆ ಮರಗಳು ಮುರಿದಿವೆ. ನೇರ್ಲವಳ್ಳಿ ಗ್ರಾಮದ ಸಾಯಿಮನೆ ಶ್ರೀಧರ ಸುಬ್ರಾಯ ಹೆಗಡೆ ತೋಟದಲ್ಲಿ 50ಕ್ಕೂ ಅಧಿಕ ಮರಗಳಿಗೆ ಹಾನಿಯಾಗಿದೆ. ಇಲ್ಲಿನ ದತ್ತಾತ್ರೇಯ ಹೆಗಡೆ, ಶ್ರೀಪಾದ ಹೆಗಡೆ, ನೇರ್ಲದದ ವಿನಯ ಗಣಪತಿ ಹೆಗಡೆ ಅವರ ತೋಟದಲ್ಲಿಯೂ ಮರಗಳು ಕಣ್ಮರೆಯಾಗಿದೆ.
ಕುಮಟಾ ರಸ್ತೆಯಿಂದ ಗೋಳಿ ದೇವಾಲಯಕ್ಕೆ ತೆರಳುವ ಮಾರ್ಗದಲ್ಲಿ ರಸ್ತೆ ಅಂಚಿನಲ್ಲಿ ಮಣ್ಣು ಕುಸಿದಿದೆ. ಗುರುವರ ರಾತ್ರಿ 1 ಗಂಟೆ ನಂತರ ವ್ಯಾಪಕ ಮಳೆ ಸುರಿದಿದ್ದು, ಹಲವು ಅವಾಂತರಗಳನ್ನು ಸೃಷ್ಠಿಸಿದೆ.