ಯಲ್ಲಾಪುರ: ಗುರುವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆ ತಾಲೂಕಿನ ಹಲವು ಕಡೆ ಹಲವು ರೀತಿಯ ಹಾನಿ ಮಾಡಿದೆ.
ಮರಹಳ್ಳಿ ಗ್ರಾಮದ ಬಂಕೊಳ್ಳಿ ಮಜಿರೆಯ ಮಹಾಬಲೇಶ್ವರ ತಮ್ಮಣ್ಣ ಕುಣಿಬಿ ಅವರ ಮನೆಯ ಗೋಡೆ ಮಳೆಗೆ ಕುಸಿದಿದೆ. ಬೀಗಾರ ಗ್ರಾಮದ ವಿನಾಯಕ ಗೌಡ ಅವರ ಮನೆಗೆ ಮಳೆ ಹಾನಿ ಮಾಡಿದೆ.

ಅತಿಯಾದ ಮಳೆಗೆ ಮಾಗೋಡ ಗ್ರಾಮದ ತಾರಿಮನೆ ಪಾರ್ವತಿ ಗಣಪತಿ ಭಟ್ಟ ಅವರ ಕೊಟ್ಟಿಗೆಮನೆ ಮೇಲೆ ಮರ ಬಿದ್ದಿದೆ. ಕಳಚೆ ಗ್ರಾಮದ ಹೊಸಕುಂಬ್ರಿಯಿoದ ಶಂಬಡೆಮನೆಕೇರಿಗೆ (ಕೊರಟಗೆರೆ ಹತ್ತಿರ) ಹೋಗುವ ರಸ್ತೆ ಸಹ ಕುಸಿದಿದೆ. ಮಳೆ ಮುಂದುವರೆದರೆ, ರಸ್ತೆ ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚಿದೆ.
ಪರಿಹಾರ ವಿತರಣೆ:

ಹಾಸಣಗಿಯಲ್ಲಿ ಮರದ ಕೆಳಗೆ ಸಿಲುಕಿ ಸಾವನಪ್ಪಿದ ವಿನಯ ದೇವಾಡಿಗ ಕುಟುಂಬಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 5 ಲಕ್ಷ ರೂ ಹಣ ನೀಡಿದರು. ಕುಟುಂಬದ ಸದಸ್ಯನನ್ನು ಕಳೆದುಕೊಂಡ ನೋವಿನಲ್ಲಿದ್ದವರಿಗೆ ಅವರು ಸಾಂತ್ವಾನ ಹೇಳಿದರು. ಊರಿನ ಸುಜಾತಾ ಸಿದ್ದಿ, ವಿನೋದಾ ಬಿಲ್ಲವ, ಎಂ ಕೆ ಭಟ್ಟ, ರಾಜೇಶ ಹೊನ್ನಳ್ಳಿ, ವಿನಿಷ್ ಭಟ್ಟ ತಹಶೀಲ್ದಾರ್ ಅಶೋಕ ಭಟ್ಟ, ಉಪತಹಶೀಲ್ದಾರ್ ಸಿ ಜಿ ನಾಯ್ಕ ಇತರರು ಇದ್ದರು.