ಜೊಯಿಡಾ: 40 ವರ್ಷಗಳಿಂದ ಪತ್ನಿ ಬಿಟ್ಟು ಬದುಕಿದ ರಾಮನಗರದ ಲುಯಿಸ್ ಫರ್ನಾಂಡಿಸ್ (75) ಎಂಬಾತ ಕೊನೆಘಳಿಗೆಯಲ್ಲಿ ಪತ್ನಿ ಫೋನ್ ಮಾಡಿದರೂ ಸಿಟ್ಟಿನಿಂದ ಮಾತನಾಡದೇ ಜುಲೈ 25ರ ಸಂಜೆ ಗಾಳಿ, ಮಳೆ, ಚಳಿಗೆ ನಡುಗಿ ಸಾವನಪ್ಪಿದ್ದಾನೆ.
ಕೂಲಿ ಕೆಲಸದ ಜೊತೆ ಜೊತೆ ಪ್ಲಾಸ್ಟಿಕ್ ಆರಿಸುತ್ತಿದ್ದ ಲುಯಿಸ್\’ನ ಪತ್ನಿ ನಾಲ್ಕು ದಶಕದ ಹಿಂದೆಯೇ ಆತನ ಬಿಟ್ಟು ಮುಂಬೈ ಸೇರಿದ್ದಳು. ಅದಾದ ನಂತರ ಆತ ಎಂಎಸ್ಐಎಲ್ ಸರಾಯಿ ಅಂಗಡಿ ಪಕ್ಕದಲ್ಲಿರುವ ತಿಳವೆ ಅವರ ಶೆಡ್ಡಿನ ಹೊರಭಾಗ ವಾಸವಾಗಿದ್ದ. ಆತ ನಡುಗುತ್ತಿರುವುದನ್ನು ನೋಡಿದ ಕೆಪಿಸಿ ಕಾಲೋನಿಯ ಸ್ಟಿವನ್ ತಮ್ಮ ಮನೆಗೆ ಬಾ ಎಂದು ಆಮಂತ್ರಿಸಿದ್ದ. ಆದರೂ, ಲುಯಿಸ್ ಅದಕ್ಕೆ ಒಪ್ಪಿರಲಿಲ್ಲ.
ಜುಲೈ 23ರಂದು ಸಂಜೆ ಸ್ಟಿವನ್ ವಡಾಪಾವ್ ನೀಡಿ ಲೂಯಿಸ್\’ನನ್ನು ಕೊನೆಯದಾಗಿ ಮಾತನಾಡಿಸಿಕೊಂಡು ಬಂದಿದ್ದ. ಆ ವೇಳೆ ಆತನ ಪತ್ನಿಗೆ ಸ್ಟಿವನ್ ಫೋನ್ ಮಾಡಿದ್ದರೂ ಲೂಯಿಸ್ ಮಾತನಾಡಿರಲಿಲ್ಲ. ಜುಲೈ 25ರಂದು ಸಂಜೆ 6 ಗಂಟೆಗೆ ಲುಯಿಸ್ ಸಾವನಪ್ಪಿದ ಬಗ್ಗೆ ಸರಾಯಿ ಅಂಗಡಿಯವರು ಮಾಹಿತಿ ನೀಡಿದ್ದು, ಸ್ಟಿವನ್ ಹೋಗಿ ಪರಿಶೀಲಿಸಿದ್ದ. ಅದಾದ ನಂತರ ಲುಯಿಸ್ ಪತ್ನಿಗೆ ಫೋನ್ ಮಾಡಿ ತಿಳಿಸಿದಾಗ `ಎಲ್ಲಾ ಕಾರ್ಯ ನೀವೇ ಮುಗಿಸಿಕೊಳ್ಳಿ\’ ಎಂದು ಆಕೆ ಹೇಳಿದ ಬಗ್ಗೆ ಸ್ಟಿವನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.