ಸಿದ್ದಾಪುರ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಹಲಗೇರಿಯ ದೇವರಾಜ ನಾಯ್ಕ (59) ಎಂಬಾತರು ಸಾವನಪ್ಪಿದ್ದಾರೆ.
ದೇವರಾಜ ನಾಯ್ಕ ಅವರ ತಂಗಿ ಅನಾರೋಗ್ಯಕ್ಕೆ ಒಳಗಾಗಿದ್ದು, ಅವರನ್ನು ನೋಡಿಬರಲು ಕುಟುಂಬಸಹಿತ ಅವರು ಕೇರಳಕ್ಕೆ ಹೊರಟಿದ್ದರು. ಮಳೆ ಹೆಚ್ಚಾಗಿರುವ ಕಾರಣ ದೇವರಾಜ ನಾಯ್ಕ ಅವರ ಮಗ ಹೇಮಂತಕುಮಾರ ನಿಧಾನವಾಗಿ ಕಾರು ಓಡಿಸುತ್ತಿದ್ದರು. ಆಡುಕಟ್ಟಾ ಕಡೆಯಿಂದ ಸಾಗರ ಕಡೆ ಹೋಗುವಾಗ ಗುಡ್ಡಕಣ ಬಳಿ ಕಾರಿನ ಮೇಲೆ ಮರ ಬಿದ್ದಿದ್ದು, ಕಿಟಕಿ ಅಂಚಿನಲ್ಲಿ ಕೂತಿದ್ದ ದೇವರಾಜ ನಾಯ್ಕ ಅವರ ಹಣೆಗೆ ಗಾಯವಾಯಿತು. ಜೊತೆಗೆ ದೇವರಾಜ ನಾಯ್ಕ ಅವರ ಪತ್ನಿ ಜಾನಕಿ ಸಹ ಗಾಯಗೊಂಡಿದ್ದು, ತಕ್ಷಣ ಊರಿನವರು ಆಗಮಿಸಿ ಕಾರಿನಲ್ಲಿ ಸಿಲುಕಿದ್ದವರನ್ನು ಹೊರತೆಗೆದರು.
ಅದೇ ಊರಿನಲ್ಲಿದ್ದ ಪ್ರವೀಣ ಎಂಬ ಸ್ನೇಹಿತನ್ನು ಸ್ಥಳಕ್ಕೆ ಕರೆಯಿಸಿಕೊಂಡ ಹೇಮಂತಕುಮಾರ್ ಅವರ ಸಹಾಯ ಪಡೆದು ಗಾಯಗೊಂಡ ದೇವರಾಜ ನಾಯ್ಕರನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷೆಗೆ ಒಳಪಡಿಸಿದ ವೈದ್ಯರು ದೇವರಾಜ ನಾಯ್ಕ ಸಾವನಪ್ಪಿದ ಬಗ್ಗೆ ಘೋಷಿಸಿದರು.