ಕಾರವಾರ: ಅರಬ್ಬಿ ಸಮುದ್ರದ ಅಬ್ಬರಕ್ಕೆ ಮಾಜಾಳಿ ಬಾವಳದಲ್ಲಿ ನಿರ್ಮಿಸಿದ್ದ ಕಾಂಕ್ರೆಟ್ ರಸ್ತೆ ಕಣ್ಮರೆಯಾಗಿದೆ.
ಕಳೆದ ಒಂದು ತಿಂಗಳಿನಿoದ ಇಲ್ಲಿ ನಿರಂತರವಾಗಿ ಕಡಲ ಕೊರೆತ ಉಂಟಾಗುತ್ತಿದ್ದು, ಮಾಜಾಳಿ, ದೇವಭಾಗ, ಬಾವಳ, ದಂಡೇಭಾಗದಲ್ಲಿ ಇದರ ದುಷ್ಪರಿಣಾಮ ಅಧಿಕವಾಗಿದೆ. 5 ವರ್ಷದ ಹಿಂದೆ ನಿರ್ಮಿಸಿದ್ದ ರಸ್ತೆ ಕಡಲ ಅಬ್ಬರಕ್ಕೆ ಬಲಿಯಾಗಿದೆ. ಅಂದಾಜು 200 ಮೀ ಉದ್ದದ ರಸ್ತೆ ಕಡಲ ಪಾಲಾಗಿದ್ದು, ಇನ್ನೂ 300 ಮೀ ಕೊಚ್ಚಿ ಹೋಗುವ ಸಾಧ್ಯತೆಗಳಿದೆ.
ದೇವಭಾಗದಿಂದ ಮಾಜಾಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿತ್ತು. ಮೊದಲು ರಸ್ತೆ ತಳಭಾಗದ ಮಣ್ಣು ಕೊಚ್ಚಿ ಹೋಗಿದ್ದು, ನಂತರ ಸಿಮೆಂಟ್ ಸಹ ನೀರು ಪಾಲಾಗಿದೆ.