ಮುಂಡಗೋಡ: ನಿರಂತರ ಮಳೆ ಸುರಿದ ಪರಿಣಾಮ ಚಿಗಳ್ಳಿಯಲ್ಲಿ ನಾಟಿ ಮಾಡಿದ್ದ ಗದ್ದೆ ಪೂರ್ತಿಯಾಗಿ ಮುಳುಗಿದೆ.
ಇದರೊಂದಿಗೆ ನಾಟಿಗೆ ಸಿದ್ಧತೆ ಮಾಡಿಕೊಂಡಿದ್ದ ಗದ್ದೆಯಲ್ಲಿಯೂ ನೀರು ತುಂಬಿದೆ. ರೈತ ಕಮಲೇಶ್ ಆಲದಕಟ್ಟೆ ಇದರಿಂದ ನಷ್ಟಕ್ಕೆ ಒಳಗಾಗಿದ್ದಾರೆ. ಸಾಲ ಮಾಡಿ ಭತ್ತ ನಾಟಿಗೆ ಇಳಿದಿದ್ದ ಅವರಿಗೆ ಈ ವರ್ಷ ಅಕ್ಕಿಯೂ ಇಲ್ಲ. ಹೂಡಿದ ಬಂಡವಾಳ ಸಹ ಸಿಗಲ್ಲ ಎಂಬ ಆತಂಕ ಎದುರಾಗಿದೆ. ಭತ್ತದ ಗಿಡಗಳೆಲ್ಲವೂ ಕೊಳೆತು ಹೋಗಿದ್ದು, ಇದರಿಂದ ಅವರು ಕಂಗಾಲಾಗಿದ್ದಾರೆ.