ಸಿದ್ದಾಪುರ: ಗಾಳಿ-ಮಳೆ ಕಾರಣದಿಂದ ರಸ್ತೆ ಮೇಲೆ ಮರ ಬೀಳುತ್ತಿದ್ದು, ಸಂಚಾರ ಸುಗಮಕ್ಕೆ ಮರ ಕಟಾವು ಮಾಡಿದ ನಾಟಾ ಮತ್ತೆ ರಸ್ತೆಗೆ ಬರುತ್ತಿದೆ. ಈ ನಾಟಾ ಜನರ ಓಡಾಟಕ್ಕೆ ಕಾಟ ಕೊಡುತ್ತಿದೆ.
ಲೋಕೋಪಯೋಗಿ, ಅರಣ್ಯ ಹಾಗೂ ಹೆಸ್ಕಾಂ ಸೇರಿ ಇದನ್ನು ತೆರವು ಮಾಡಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ. ಹಾರ್ಸಿಕಟ್ಟಾ-ಗೋಳಿಮಕ್ಕಿ ರಸ್ತೆಯ ಮಾದಲಮನೆ ಬಸ್ ನಿಲ್ದಾಣದ ಸಮೀಪ ವಿದ್ಯುತ್ ತಂತಿ ಮೇಲೆ ಕಾಡು ಜಾತಿಯ ಮರ ಬಿದ್ದಿದ್ದು, ಮರ ತೆರವು ಮಾಡಿದ ನಂತರ ನಾಟಾ ಅಲ್ಲೇ ಬಿಡಲಾಗಿದೆ ಎಂದು ಮಾದಲಮನೆ ಗ್ರಾಮದ ಮಂಜುನಾಥಗೌಡ, ಭಾಸ್ಕರಗೌಡ, ಕೊಳಗಿಜಯ ದಿನೇಶ ಹೆಗಡೆ ದೂರಿದರು.