ಕುಮಟಾ: ಉಳುವರೆಗೆ ತೆರಳಿದ ಗೋಕರ್ಣ ಹವ್ಯಕ ಕ್ಷೇಮಾಭಿವೃದ್ಧಿ ಸಂಘದದವರು ಅಲ್ಲಿನ ಸಂತ್ರಸ್ತರಿಗೆ ತಮ್ಮ ಸಂಘದ ನಿಧಿಯಿಂದ ಆರ್ಥಿಕ ನೆರವು ನೀಡಿದರು. ಇದಾದ ನಂತರ ನೊಂದವರ ಬಾಳು ಬೆಳಗಲಿ ಎಂದು ಮಹಾಬಲೇಶ್ವರನಲ್ಲಿ ಪ್ರಾರ್ಥಿಸಿದರು.
ಸಂಘದ ಅಧ್ಯಕ್ಷ ಕೆ ಜಿ ಗುಣಿಯವೆ ನೊಂದವರಿಗೆ ಸಾಂತ್ವಾನ ಹೇಳಿದರು. ಜೊತೆಗೆ ಅಗತ್ಯ ವಸ್ತುಗಳನ್ನು ನೀಡಿದರು. ಸಂಘದ ಪ್ರಮುಖರಾದ ರಮೇಶ್ ಪ್ರಸಾದ್, ರವೀಂದ್ರ ಕೊಡ್ಲೆಕೆರೆ ಇತರರು ಅಕ್ಕಿ, ಬಟ್ಟೆ,ಕಾಯಿ ,ಚಾಪೆ ,ಸೇರಿದಂತೆ ನಿತ್ಯ ಬಳಕೆಗೆ ಬೇಕಾದ ಸಾಮಗ್ರಿಯನ್ನು ವಿತರಿಸಿದರು.