ಶಿರೂರು ಗುಡ್ಡ ಕುಸಿತದಿಂದ ನದಿ ಆಳಕ್ಕೆ ಸೇರಿದ ಲಾರಿ ಹುಡುಕಲು ಭಾನುವಾರ ಕೊನೆಯ ಪ್ರಯತ್ನ ನಡೆಸಲಾಗುತ್ತದೆ. ಈ ದಿನ ಸಹ ಲಾರಿ ಸಿಕ್ಕಿಲ್ಲ ಎಂದಾದರೆ ಮತ್ತೆ ಲಾರಿ ಹುಡುಕುವ ಪ್ರಯತ್ನ ಮುಂದುವರೆಯುವುದಿಲ್ಲ.
ಲಾರಿ ನಾಪತ್ತೆಯಾಗಿ 13 ದಿನ ಕಳೆದಿದ್ದು, ನೌಕಾಪಡೆ, ಸೇನೆ ಹಾಗೂ ದೆಹಲಿ ತಂಡ ನೀಡಿದ್ದ 4 ಪ್ರದೇಶದಲ್ಲಿ ಶೋಧ ನಡೆಸಿದರೂ ಕುರುಹು ಸಿಕ್ಕಿಲ್ಲ. ಮಲ್ಪೆಯ ಮುಳುಗುತಜ್ಞ ಈಶ್ವರ ತಂಡದಿAದ ಕಾರ್ಯಾಚರಣೆ ಮಡೆಸಿದರೂ ಲಾರಿ ದೊರೆತಿಲ್ಲ. ಭಾನುವಾರ ಸಹ ಈಶ್ವರ ಮಲ್ಪೆ ತಂಡದವರು ಲಾರಿ ಹುಡುಕಾಟ ನಡೆಸಲಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ಮಾಹಿತಿ ನೀಡಿದ್ದಾರೆ. `ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಸ್ಥಳೀಯ ಮೀನುಗಾರರ ಸಹಾಯದಿಂದ ಕಾರ್ಯಾಚರಣೆ ನಡೆಯುತ್ತಿದೆ. ಮೂರು ಜಾಗಗಳಲ್ಲಿ ಪರಿಶೀಲಿಸಿದಾಗ ಕಲ್ಲು, ಮಣ್ಣು, ಮರದ ತುಂಡು ಹೆಚ್ಚಾಗಿ ಪತ್ತೆಯಾಗಿದೆ. ಇವುಗಳನ್ನ ತೆರವುಗೊಳಿಸಿ ಆಳದಲ್ಲಿ ಪರಿಶೀಲನೆ ನಡೆಸಬೇಕಿದೆ. ನೀರಿನ ಹರಿವು 10 ನಾಟ್ಸ್ಗಿಂತ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇದೀಗ ಕೊನೆಯ ಪ್ರಯತ್ನವನ್ನ ಮಾಡುತ್ತೇವೆ\’ ಎಂದವರು ಹೇಳಿದರು.