ಕಾರವಾರ: ವಿಜಯನಗರದ ಖುರ್ಸೆವಾಡ ಚಮನ್ ಶೇಖ್ (38) ಎಂಬಾತ ವಿಪರೀತ ಸರಾಯಿ ಕುಡಿತಕ್ಕೆ ಒಳಗಾಗಿ ಸಾವನಪ್ಪಿದ್ದಾನೆ.
ಕಟ್ಟಡಗಳನ್ನು ಕಟ್ಟುವ ಕಡೆ ಗೌಂಡಿ ಕೆಲಸ ಮಾಡುತ್ತಿದ್ದ ಈತ ನಿತ್ಯ ಸರಾಯಿ ಕುಡಿಯುವುದನ್ನು ರೂಢಿಸಿಕೊಂಡಿದ್ದ. ಸರಾಯಿ ಕುಡಿದ ನಂತರ ಮನೆಗೆ ಬರುತ್ತಿರಲಿಲ್ಲ. ನಗರದ ಲಂಡನ್ ಸೇತುವೆ ಸುತ್ತಲು ರಾತ್ರಿ ಕಳೆಯುವುದು ಈತನ ದಿನಚರಿಯಾಗಿತ್ತು. ಜುಲೈ 8ರಂದು ಸಹ ಈತ ಅಲ್ಲಿ ಅಸ್ವಸ್ಥನಾಗಿ ಬಿದ್ದಿದ್ದು, ಇದನ್ನು ನೋಡಿದ ಕ್ರೆöÊಡ್ ನೈಸ್ ಇಸ್ ಪ್ರೀ ಸಂಸ್ಥೆಯ ಶಿಲ್ಪಾ ಡಿಸೋಜಾ ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ವೇಳೆ ಆತನಿಗೆ ಟಿಬಿ ಕಾಯಿಲೆ ಇರುವ ಬಗ್ಗೆ ಗೊತ್ತಾಗಿತ್ತು. ಇದಕ್ಕೆ ಚಿಕಿತ್ಸೆ ನೀಡುತ್ತಿರುವ ವೇಳೆ ಚಿಕಿತ್ಸೆಗೆ ಸ್ಪಂದಿಸೇ ಆತ ಜುಲೈ 27ರಂದು ಸಾವನಪ್ಪಿದ್ದಾನೆ.