ಕುಮಟಾ: ದುಬ್ಬನಸಶಿ ಕಡಲತೀರದದಲ್ಲಿ ಲಂಗರು ಹಾಕಿದ್ದ `ಶ್ರೀಗುರು ರಾಘವೇಂದ್ರ\’ ಹೆಸರಿನ ನಾಡದೋಣಿ ಮೇಲೆ ಮರ ಬಿದ್ದಿದೆ. ಪರಿಣಾಮ ದೋಣಿ ಮುರಿದಿದೆ.
ಪಂಢರಿನಾಥ ಪಟ್ಟು ಮೊರ್ಜೆ ಅವರಿಗೆ ಸೇರಿದ ದೋಣಿ ಇದಾಗಿತ್ತು. ಮೀನುಗಾರಿಕೆ ನಿಷೇಧದ ಕಾರಣ ಅವರು ದೋಣಿಯನ್ನು ದಡದಲ್ಲಿ ನಿಲ್ಲಿಸಿದ್ದರು. ಪ್ರಸ್ತುತ ಮರಬಿದ್ದು ದೋಣಿ ಮುರಿದಿದ್ದರಿಂದ ಪಂಢರಿನಾಥರಿಗೆ 2 ಲಕ್ಷ ರೂ ಹಾನಿಯಾಗಿದೆ.