ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಪತ್ರಕರ್ತೆಯರಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರಶಸ್ತಿ ಘೋಷಿಸಿದೆ.
ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿಗೆ ಪ್ರಜಾವಾಣಿಯ ಹುಬ್ಬಳ್ಳಿ ಬ್ಯೂರೊ ಹಿರಿಯ ವರದಿಗಾರ್ತಿ ಕೃಷ್ಣಿ ಶಿರೂರ ಭಾಜನರಾಗಿದ್ದಾರೆ. ಇದರೊಂದಿಗೆ ಪ್ರಾಫಿಟ್ ಪ್ಲಸ್ ಸಂಪಾದಕಿ ಸುಧಾ ಶರ್ಮಾ ಚವತ್ತಿ ಅವರ ಅಂಕಣ ಬರಹಗಳಿಗೆ ಪುರಸ್ಕಾರ ದೊರೆತಿದೆ. ಜುಲೈ 29ರಂದು ಬೆಳಿಗ್ಗೆ 10ಗಂಟೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.