ಮುoಡಗೋಡ: ಪಾಳಾ ಹೊಸನಗರದ ರವಿ ಅಕ್ಕಸಾಲಿ (25) ಎಂಬಾತ ಹುಡೇಲಕೊಪ್ಪದ ಮಾವಿನ ತೋಟದಲ್ಲಿ ನೇಣಿಗೆ ಶರಣಾಗಿದ್ದಾನೆ.
ಕೆಲ ದಿನಗಳಿಂದ ಬೇಸರದಲ್ಲಿರುತ್ತಿದ್ದ ಈತ ಸರಾಯಿ ಕುಡಿಯುವುದನ್ನು ರೂಢಿಸಿಕೊಂಡಿದ್ದ. ಜುಲೈ 27ರ ಸಂಜೆ ಮನೆಯಲ್ಲಿಯೇ ಇದ್ದ ಈತ ಹುಡೇಲಕೊಪ್ಪದ ಅಶೋಕ ಅಕ್ಕಸಾಲಿ ಅವರ ಹೊಲಕ್ಕೆ ತೆರಳಿದ್ದು, ಅಲ್ಲಿದ್ದ ಮಾವಿನ ಮರಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಜುಲೈ 28ರ ಬೆಳಗ್ಗೆ ಆತ ಸಾವನಪ್ಪಿರುವುದು ಗೊತ್ತಾಗಿದೆ. `ತನ್ನ ಮಗನ ಸಾವಿನಲ್ಲಿ ಸಂಶಯವಿದೆ\’ ಎಂದು ಮಾರುತಿ ಅಕ್ಕಸಾಲಿ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ.