ಹಳಿಯಾಳ: ಅಂಚೆ ಕಚೇರಿ ರಸ್ತೆಯಲ್ಲಿ ಸಾರ್ವಜನಿಕರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಅವರು ಗಾಂಜಾ ಸೇವಿಸಿರುವುದು ದೃಢವಾಗಿದೆ.
ಈ ಹಿನ್ನಲೆ ಒಂದೇ ಮನೆಯ ಇಬ್ಬರನ್ನು ಸೇರಿ ಒಟ್ಟು ಮೂರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆನೆಗುಂದಿಯ ಫೋಟೋಗ್ರಾಫರ್ ಸಮರ್ಥ ಶಂಕರ್ ಲಕಡೆ (27 ವರ್ಷ), ಆತನ ತಮ್ಮ ಪೇಂಟರ್ ಸಂಕೇತ ಶಂಕರ್ ಲಕಡೆ (24) ಹಾಗೂ ಗುತ್ತಿಗೆದಾರ ಮನೋಹರ ಶ್ರೀಕಾಂತ ಮಾದರ (25)ನನ್ನು ಗಾಂಜಾ ಸೇವಿಸಿದವರು. ಜುಲೈ 28ರಂದು ಅವರು ರಸ್ತೆ ಮೇಲೆ ನಿಂತು ಗಲಾಟೆ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಪೊಲೀಸರ ಜೊತೆ ಕೆಟ್ಟದಾಗಿ ವರ್ತಿಸಿದ್ದರು. ಇದರಿಂದ ಅನುಮಾನಗೊಂಡ ಪಿಸೈ ವಿನೋದ ಎಸ್ ಕೆ ಅವರನ್ನು ದಾಂಡೇಲಿಗೆ ಕಳುಹಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ಗಾಂಜಾ ಸೇವಿಸಿರುವುದು ಖಚಿತವಾಗಿದೆ. ನಂತರ ಪೊಲೀಸರು ತಮ್ಮದೇ ಶೈಲಿಯಲ್ಲಿ ಈ ಮೂವರ ನಶೆ ಇಳಿಸಿದ್ದಾರೆ.