ಹೊನ್ನಾವರ: ಮೂಡ್ಕಣಿಯ ಪ್ರೌಢಶಾಲೆ ಶಿಕ್ಷಕ ಸುಬ್ರಾಯ ಗೌಡ ಅವರ ಅಳಿಯ ಮಂಜುನಾಥ ನಾಗಪ್ಪ ಗೌಡ (29 ವರ್ಷ) ತೋಟಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಮನೆಗೆ ಮರಳಿಲ್ಲ.
ಹೊನ್ನಾವರದ ಗದ್ದೆಮನೆಯಲ್ಲಿ ವಾಸವಾಗಿದ್ದ ಮಂಜುನಾಥ ಗೌಡ ಜುಲೈ 27ರ ಮಧ್ಯಾಹ್ನ 12.30ಕ್ಕೆ ತೋಟಕ್ಕೆ ಹೋಗಿದ್ದರು. ಸಂಜೆ ಆದರೂ ಅವರು ಮನೆಗೆ ಬಂದಿಲ್ಲ. ಇದರಿಂದ ಆತಂಕಗೊoಡ ಮನೆಯವರು ಎಲ್ಲಾ ಕಡೆ ಹುಡುಕಾಟ ನಡೆಸಿದರು. ಸಂಬoಧಿಕರ ಮನೆಗೂ ಫೋನ್ ಮಾಡಿ ವಿಚಾರಿಸಿದರು. ಆದರೂ, ಅವರು ಪತ್ತೆಯಾಗಿಲ್ಲ. ಹೀಗಾಗಿ ಅವರನ್ನು ಹುಡುಕಿಕೊಡಿ ಎಂದು ಶಿಕ್ಷಕ ಸುಬ್ರಾಯ ಗೌಡ ಪೊಲೀಸ್ ದೂರು ನೀಡಿದ್ದಾರೆ.