ಶಿರಸಿ: `ದೇವರನ್ನು ನಂಬಿ ಸ್ಮರಣೆ ಮಾಡುವುದರಿಂದ ಎಲ್ಲಾ ಸಮಸ್ಯೆಗಳಿಂದ ಪಾರಾಗಲೂ ಸಾಧ್ಯ\’ ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಮಠಾಧೀಶ ಶ್ರೀ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಸ್ವರ್ಣವಲ್ಲೀ ಮಠದಲ್ಲಿ ತಮ್ಮ 34ನೇ ಹಾಗೂ ಕಿರಿಯ ಸ್ವಾಮೀಜಿ ಶ್ರೀಆನಂದಬೋಧೇoದ್ರ ಸರಸ್ವತೀ ಸ್ವಾಮೀಜಿಗಳ ಪ್ರಥಮ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸಿದ ಭಂಡಾರಿ ಸಮಾಜದ ಭಕ್ತರನ್ನು ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು.
`ಮನುಷ್ಯನು ತನ್ನ ಸಮಸ್ಯೆಯಿಂದ ಹೊರಗೆ ಬರುವ ಕಲೆ ಎಂದರೆ ಅದುವೇ ದೇವರ ಧ್ಯಾನ. ದೇವರಲ್ಲಿ ಪೂರ್ತಿಯಾಗಿ ಮನಸ್ಸಿಡುವುದೇ ಸಮಸ್ಯೆಯಿಂದ ಹೊರಗೆ ಬರುವ ಉಪಾಯ\’ ಎಂದರು. `ಸಂಸಾರಿಗಳಿಗೆ ಅನೇಕ ಸಮಸ್ಯೆಗಳು ಇರುತ್ತವೆ. ಆ ಸಮಸ್ಯೆಗಳ ಮಧ್ಯದಲ್ಲಿ ದೇವರಲ್ಲಿ ಮನಸ್ಸಿಡುವುದು ಬಹಳ ಮುಖ್ಯ\’ ಎಂದರು. `ಎಲ್ಲೆಲ್ಲೋ ಓಡಾಡುತ್ತಿರುವ ಮನಸ್ಸನ್ನು ದೇವರ ಧ್ಯಾನದಲ್ಲಿ ಪೂರ್ತಿಯಾಗಿ ತೊಡಗುವ ಹಾಗೆ ಮಾಡಬೇಕು. ಸಂಸಾರ ಎನ್ನುವುದು ಒಂದು ಪ್ರವಾಹ ಇದ್ದ ಹಾಗೆ ನಮ್ಮನ್ನು ತೇಲಿಸಿಕೊಂಡು ಹೋಗುವಂತಹ ಚಿಂತೆಗಳು ನಮ್ಮನ್ನು ಬಾಧಿಸುತ್ತ ಇರುತ್ತವೆ. ನಮ್ಮ ನಿದ್ರೆ – ಕೆಲಸಗಳಿಗೆ ಭಂಗವನ್ನು ಉಂಟುಮಾಡುತ್ತವೆ. ಈ ಪ್ರವಾಹದಲ್ಲಿ ದುರ್ಬಲ ಮನಸ್ಸಿನ ವ್ಯಕ್ತಿಗಳು ಸಿಲುಕಿಕೊಂಡು ಆಚೆ ಬರಲು ಸಾಧ್ಯವಾಗುವುದಿಲ್ಲ. ಯಾರು ಈ ಸಂಸಾರವೆoಬ ಪ್ರಹವಾದ ಎದುರು ನಿಂತು ಅದನ್ನು ಎದುರಿಸುತ್ತಾರೋ ಅವರು ಧೀರನೆನಿಸುತ್ತಾರೆ. ದೇವರಲ್ಲಿ ಮನಸ್ಸಿಡುವುದರ ಮೂಲಕ ಆ ಪ್ರಹಾವವನ್ನು ದಾಟಬೇಕು\’ ಎಂದು ಕರೆ ನೀಡಿದರು.